ಅಥಣಿ ಜೆ.ಇ.ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಭಾರತೀಯರು ಜ್ಞಾನದಿಂದ ಶ್ರೀಮಂತರು, ಜ್ಞಾನ ಆರಾಧಕರು: ಸಿದ್ಧೇಶ್ವರಶ್ರೀ

ಅಥಣಿ ದಿ.21 ಜಗತ್ತಿಗೆ ಭಾರತೀಯರು ``ಶೂನ್ಯ' ವನ್ನು ಕೊಟ್ಟು ಶ್ರೇಷ್ಠತೆಗೆ ಕಾರಣೀಕರ್ತರಾಗಿದ್ದಾರೆ.  ಯಾವುದೇ ಶಾಸ್ತ್ರವನ್ನು ತೆಗೆದುಕೊಳ್ಳಿ, ಅಲ್ಲಿ ಭಾರತೀಯರದು ಹೆಮ್ಮೆಯ ಕೊಡುಗೆ ಇದ್ದೆ ಇದೆ. ಭಾರತೀಯರು ಆಥರ್ಿಕ ದೃಷ್ಟಿಯಿಂದ ಬಡವರು, ಗುಡಿಸಲಲ್ಲೆ ವಾಸಿಸಿದರೂ, ಜ್ಞಾನದಿಂದ ಶ್ರೀಮಂತರಾಗಿದ್ದಾರೆ. ಜ್ಞಾನದ ಬೆಳಕಿನಲ್ಲಿ ಸಂತೋಷ ಪಡುವ ಜನ ಭಾರತೀಯರು. ಈ ಕಾರಣಕ್ಕಾಗಿ ಪಾಶ್ಚಿಮಾತ್ಯರು ಭಾರತೀಯರನ್ನು ಗೌರವಿಸುತ್ತಾರೆ ಎಂದು ವಿಜಯಪೂರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಸ್ಥಳೀಯ ಜಾಧವಜಿ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಪ್ರಾರಂಭೋತ್ಸವದ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಇಲ್ಲಿಯ ಜೆ.ಇ ಶಿಕ್ಷಣ ಸಂಸ್ಥೆಯನ್ನು ನೋಡಲಾಗಿ, ತುಂಬ ಸುಸಂಸ್ಕೃತಿಯನ್ನು ಹೊಂದಿದ್ದು, ಸರಸ್ವತಿ ಲಕ್ಷ್ಮೀ ಇರ್ವರೂ ಒಂದೆಡೆ ನೆಲೆಸಿರುವ ಸಂಸ್ಥೆ. ಹೆಮ್ಮರವಾಗಿ ಬೆಳೆದು ನೂರು ವಸಂತ ಕಂಡಿರುವ ಸಂತಸ ಎಂದು ಜಾಧವಜಿ ಶಿಕ್ಷಣ ಸಂಸ್ಥೆಯ ಏಳ್ಗೆಯನ್ನು ಮುಕ್ತ ಕಂಠದಿಂದ ಪ್ರಶಂಸಿದರು.

ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವವರು, ನಾನು ನೌಕರಸ್ಥನಲ್ಲ, ಬದುಕಿನ ಜ್ಞಾನ ಹಂಚಿಕೊಳ್ಳುವ ಅಧ್ಯಾಪಕ ಎಂದು ತಿಳಿದು ಸೇವೆ ಸಲ್ಲಿಸುವಂತಿದ್ದರೆ ಅದು ಫಲದಾಯಕ ಅಲ್ಲದೇ ಶಿಕ್ಷಣ ಸಂಸ್ಥೆಗಳು ಕೂಡ ಮಕ್ಕಳನ್ನು ನೋಡಿ ಶಾಲೆಗೆ ಪ್ರವೇಶ ನೀಡಿ, ಅವರ ತಂದೆತಾಯಿಗಳನ್ನು ನೋಡಿ ಅಲ್ಲ ಎಂಬ ಕಿವಿಮಾತು ಹೇಳಿ, ಸಂಸ್ಥೆಯ ಹಳೆ ವಿದ್ಯಾಥರ್ಿಗಳು ಏರಿದ ಎತ್ತರ ಕಂಡು ಹರ್ಷ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಿಂದಿನ ವಿದ್ಯಾಥರ್ಿ ಹಾಗೂ ರಾಜಕೋಟದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆನಂದ ಜೋಶಿ ಅವರು ಆಗಮಿಸಿ, ಪರೋಕ್ಷ ಅಪರೋಕ್ಷದಿಂದ ಜ್ಞಾನ ಸಂಪಾದಿಸುವದರೊಂದಿಗೆ, ಕಲಿಕೆಯಲ್ಲಿ ನಾಲ್ಕು ವಿಧಗಳನ್ನು ಅಳವಡಿಸಿಕೊಳ್ಳಬೇಕು. ಕಾಲು ಭಾಗದಂತೆ ಕಲಿಕೆ, ಶಿಕ್ಷಕರಿಂದ, ಪಠ್ಯೇತರ ಹಾಗೂ ಕೌಶಲ್ಯದಿಂದ ಪೂರ್ಣತೆಯ ಶಿಕ್ಷಣ ಪಡೆದುಕೊಳ್ಳಬೇಕು. ಹಿಂದೆ ಶಿಕ್ಷಕರೆಂದರೆ ಭಯ, ಭಕ್ತಿ ಇತ್ತು. ಇಂದು ಶಿಕ್ಷಕ ಕೇವಲ ಕಲಿಸುವ ಯಂತ್ರ ಎಂಬ ಭಾವನೆ ಇದೆ ಅದು ಹೋಗಬೇಕಿದೆಯಲ್ಲದೆ ಪುಸ್ತಕಿಯ ಜ್ಞಾನಕ್ಕಿಂತ ಅನುಭವ ಜ್ಞಾನದ ಅವಶ್ಯವಿದೆ ಎಂದರು.

 ಅತಿಥಿಗಳಾಗಿ ಮುಂಬೈ ಸಂಶೋಧನ ಕೇಂದ್ರದ ಕಾಮಾಕ್ಷಿ ಭಾಟೆ (ಕುಲಕಣರ್ಿ) ಅವರು ಆಗಮಿಸಿ ವ್ಯಕ್ತಿಗಿಂತ ಸಂಸ್ಥೆ ದೊಡ್ಡದು. ಆ ದಿಸೆಯಲ್ಲಿ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸೋಣವೆಂದರು. ಸುಂಧೀಂದ್ರ ಕುಲಕಣರ್ಿಯವರು ಭಾಟೆ, ಕುಲಕಣರ್ಿ ಹಾಗೂ ಕಾಥವಟೆ ಕುಟುಂಬಗಳ ಧಾನ ಹಾಗೂ ಸೇವಾ ಸಂಕಲ್ಪ ಕುರಿತು ವಿವರಿಸಿದರು. ಸಂಸ್ಥೆಯ ಕಾಯರ್ಾಧ್ಯಕ್ಷರಾದ ಅರವಿಂದರಾವ ದೇಶಪಾಂಡೆ ಸಂಸ್ಥೆಯ ನೂರರ ಸಂಭ್ರಮದಲ್ಲಿ ಮುಂದಿನ ಯೋಜನೆಗಳ ಕುರಿತು ತಿಳಿಸಿ ದಾನಿಗಳಿಗೆ ಕೃತಜ್ಞತೆ ತಿಳಿಸಿದರು. 


ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ರಾಜಾಬಾಹು ಶಿರಗಾಂವಕರ  ವಹಿಸಿದ್ದರು. ಪ್ರಾರಂಭದಲ್ಲಿ ಸಸಿಗೆ ನೀರೆರೆಯುವ ಮೂಲಕ ಶತಮಾನೋತ್ಸವ ಪ್ರಾರಂಭೋತ್ಸವಕ್ಕೆ ಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಸ್ವಾಗತವನ್ನು ಡಾ. ರಾಮ ಕುಲಕಣರ್ಿ, ಪ್ರಾಸ್ತಾವಿಕವನ್ನು ಅರವಿಂದರಾವ ದೇಶಪಾಂಡೆ ಮಾತನಾಡಿದರು. ಡಾ. ಪಿ ಪಿ ಮಿರಜ ಪರಿಚಯಿಸಿದರು. ಸತೀಶ ಕುಲಕಣರ್ಿ ವಂದಿಸಿದರು. ಅನಂತ ಮುತಾಲಿಕ ವಂದೆ ಮಾತರಂದೊಂದಿಗೆ ಮುಕ್ತಾಯಗೊಂಡಿದರು.

 ಸಮಾರಂಭದಲ್ಲಿ ವಿವಿಧ ರಾಜ್ಯಗಳಿಂದ ಹಳೆ ವಿದ್ಯಾಥರ್ಿಗಳು ಆಗಮಿಸಿದ್ದರು. ರಮೇಶ ಭಾಟೆ ಅನೀಲ ದೇಶಪಾಂಡೆ, ವಿಮೋಚನಾದ ಬಿ. ಎಲ್ ಪಾಟೀಲ, ಎಸ್ ಎಂ ಪಾಟೀಲ, ಆನಂದ ದೇಶಪಾಂಡೆ, ಆರ್ ಬಿ. ದೇಶಪಾಂಡೆ, ಸಂದೀಪ ಸಂಗೋರಾಮ, ಸಿ.ಎನ್ ಮುತಾಲಿಕ ದೇಸಾಯಿ, ಎ.ಆರ್ ಕುಲಕಣರ್ಿ ಮೊದಲಾದವರು ಉಪಸ್ಥಿತರಿದ್ದರು. ವಾಮನ ಕುಲಕಣರ್ಿ, ಮೃಣಾಲಿನಿ ದೇಶಪಾಂಡೆ ನಿರೂಪಿಸಿದರು.   .